ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಬ್ರಹ್ಮಾವರ: ‘ಗಾನ ತ್ರಿವಳಿ’ ಧ್ವನಿಸುರುಳಿ ಬಿಡುಗಡೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ನವ೦ಬರ್ 27 , 2013
ನವ೦ಬರ್ 27 , 2013

ಬ್ರಹ್ಮಾವರ: ‘ಗಾನ ತ್ರಿವಳಿ’ ಧ್ವನಿಸುರುಳಿ ಬಿಡುಗಡೆ

ಬ್ರಹ್ಮಾವರ : ಹೆರೆಂಜಾಲು ಯಕ್ಷಗಾನ ಪ್ರತಿಷ್ಠಾನ ಯಕ್ಷಬಳಗ ನಾಗೂರು ವತಿಯಿಂದ, ರಾಜ್ಯ ಪ್ರಶಸ್ತಿ ಪುರಸ್ಕೃತ ಹೆರೆಂಜಾಲು ವೆಂಕಟರಮಣ ಗಾಣಿಗ ಸ್ಮರಣಾರ್ಥವಾಗಿ, ಬಡಗು ತಿಟ್ಟಿನ ಸಂಪ್ರದಾಯ ಶೈಲಿಯ ಭಾಗವತ ಹೆರೆಂಜಾಲು ಗೋಪಾಲ ಗಾಣಿಗ ಹಾಗೂ ಅವರ ಪುತ್ರ ಹೆರೆಂಜಾಲು ಪಲ್ಲವ ಗಾಣಿಗ ಜಂಟಿ ಹಾಡುಗಾರಿಕೆ­ಯ ಹಾಗೂ ಹಿಲ್ಲೂರು ರಾಮಕೃಷ್ಣ ಹೆಗಡೆ ಅವರ ಕಂಠಸಿರಿಯ ಸಾಂಪ್ರ­ದಾಯಿಕ ಯಕ್ಷಗಾನ ಪದ್ಯಗಳ ಧ್ವನಿಸು­ರುಳಿ ‘ಗಾನ ತ್ರಿವಳಿ’ಯ ಬಿಡುಗಡೆ ಕಾರ್ಯಕ್ರಮ ಅಮೃತೇಶ್ವರೀ ಮೇಳದ ಯಕ್ಷಗಾನ ವೇದಿಕೆಯಲ್ಲಿ ಮೂಡುಗಿಳಿ­ಯಾರಿನಲ್ಲಿ ಇತ್ತೀಚೆಗೆ ನೆರವೇರಿತು.

ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ ಸಿ, ಕುಂದರ್ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಮಾತನಾಡಿ ಹೆರೆಂಜಾ­ಲು ಗೋಪಾಲ ಗಾಣಿಗ­ರಂತಹ ಬಡಗು ತಿಟ್ಟಿನ ಶ್ರೇಷ್ಠ ಭಾಗವತ ಅಮೃತೇಶ್ವರೀ ಮೇಳದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಮೇಳಕ್ಕೆ ಹೆಮ್ಮೆಯಾಗಿದ್ದು ಅವರು ಹೊರತಂದ ಧ್ವನಿಸುರುಳಿಗೆ ಶುಭವಾಗಲಿ ಎಂದರು. ಮಣಿಪಾಲ ಎಂ.ಐ.ಟಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಸ್.ವಿ.ಉದಯ್ ಕುಮಾರ್ ಶೆಟ್ಟಿ ಮಾತನಾಡಿ ಯಕ್ಷಗಾನದ ಧ್ವನಿಸುರುಳಿಗಳು ಕೇವಲ ಮನೋರಂಜನೆಗೆ ಸೀಮಿತವಾಗಿರದೆ ಯಕ್ಷಗಾನ ಭಾಗವತಿಕೆ ಅಭ್ಯಾಸಕ್ಕೂ ಸಹಕಾರಿಯಾಗುತ್ತದೆ ಎಂದರು.

ತಾ.ಪಂ ಸದಸ್ಯ ರತ್ ಕುಮಾರ್ ಶೆಟ್ಟಿ, ಪಂಚಾಯಿತಿ ಸದಸ್ಯ ರಾಜ­ರಾಮ್ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸುಬ್ರಾಯ ಆಚಾರ್, ಪಲ್ಲವಿ ಗಾಣಿಗ, ಹೆರೆಂಜಾಲು ಗೋಪಾಲ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ರಾಜು ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಕೃಪೆ : http://prajavani.net


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Sandeep Ganiga(12/3/2013)
Songs are very beautiful..heranjal is always best..all the best to HGG and bayalata.com..




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ